== ಪರಿಚಯ == ಸರಸ್ವತಿ ಸಮ್ಮಾನ್ ಇದು ಭಾರತೀಯ ಭಾಷೆಗಳಲ್ಲಿ ಬರೆಯುವ ಶ್ರೇಷ್ಠ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ. ಇದನ್ನು ವಿದ್ಯೆಯ ದೇವಿಯಾಗಿರುವ ಸರಸ್ವತಿಯ ಹೆಸರಿನಲ್ಲಿ ಸ್ಥಾಪಿತವಾಗಿರುತ್ತದೆ. ಇದು ಸಾಹಿತ್ಯದ ಒಂದು ಉನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ೧೫ಲಕ್ಷ ರೂಪಾಯಿ ನಗದನ್ನು ಹೊಂದಿದೆ. ಕೆ. ಕೆ. ಬಿರ್ಲಾ ಪ್ರತಿಷ್ಥಾನವು ಈ ಪ್ರಶಸ್ತಿಯನ್ನು ೧೯೯೧ರಲ್ಲಿ ಸ್ಥಾಪಿಸಿತು. == ಸಮ್ಮಾನಿತರು == ೧೯೯೧ - ಹರಿವಂಶರಾಯ್ ಬಚ್ಚನ್ ೧೯೯೨ - ರಮಾಕಾಂತ್ ರಥ್ ೧೯೯೩ - ವಿಜಯ್ ತೆಂಡೂಲ್ಕರ್ ೧೯೯೪ - ಹರ್ಭಜನ್ ಸಿಂಗ್ ೧೯೯೫ - ಬಲಮಣಿ ಅಮ್ಮ ೧೯೯೬ - ಶಮ್ಶುರ್ ರಹ್ಮಾನ್ ಫರೂಖಿ ೧೯೯೭- ಮನುಭಾಯ್ ಪಂಚೋಲಿ ೧೯೯೮ - ಸಂಖ ಘೋಷ್ ೧೯೯೯ - ಇಂದಿರಾ ಪಾರ್ಥಸಾರಥಿ ೨೦೦೦ - ಮನೋಜ್ ದಾಸ್ ೨೦೦೧ - ದಲೀಪ್ ಕೌರ್ ತಿವಾನ ೨೦೦೨ - ಮಹೇಶ್ ಎಲ್ಕುಂಚ್ವರ್ ೨೦೦೩ - ಗೋವಿಂದ್ ಚಂದ್ರ ಪಾಂಡೆ ೨೦೦೪- ಸುನಿಲ್ ಗಂಗೋಪಾಧ್ಯಾಯ್ ೨೦೦೫ - ಕೆ. ಅಯ್ಯಪ್ಪ ಪಣಿಕರ್ ೨೦೦೬ - ಜಗನ್ನಾಥ್ ಪ್ರಸಾದ್ ದಾಸ್ ೨೦೦೭ - ನಯ್ಯರ್ ಮಸೂದ್ ೨೦೦೮ - ಲಕ್ಷ್ಮಿ ನಂದನ್ ಬೋರ ಅವರ ಕಾಯಕಲ್ಪ ಕಾದಂಬರಿ ೨೦೦೯ - ಸುರ್‍ಜಿತ್ ಪಾತರ್ ಅವರ ಲಫ್‍ಝಾನ್ ದಿ ದರಗಹ್ ಪುಸ್ತಕ ೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ ೨೦೧೧ - ಎ.ಎ.ಮನವಾಲನ್ ಅವರ ಇರಾಮ ಕಥೈಯುಂ ಇರಮ್ಯಕಲುಂ ಪುಸ್ತಕ ೨೦೧೨ - ಸುಗತಕುಮಾರಿ ಅವರ ಕಾವ್ಯ ಸಂಗ್ರಹ ಮನಲೆಝುಥು ೨೦೧೩ - ಗೋವಿಂದ ಮಿಶ್ರ ಪುಸ್ತಕ ಧೂಲ್ ಪೌಧೋ ಪಾರ್ ೨೦೦೮ರಲ್ಲಿ ಪ್ರಕಟವಾಗಿದೆ. ೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ ೨೦೧೫- ಪದಮಾ ಸಚ್ಚದೇವ ಅವರ ಆತ್ಮಚರಿತ್ರೆ ಚಿಟ್-ಚೆಟೆ (ಡೊಗ್ರಿ ಭಾಷೆ) ೨೦೧೬- ಮಹಾಬಲೇಶ್ವರ ಸಾಯಿಲ್ ಅವರ ಕಾದಂಬರಿ ಹೌಥಾನ (ಕೊಂಕಣಿ ಭಾಷೆ) ೨೦೧೭- ಸಿತ್ನಶು ಯಶ್ಸಶ್ಚಂದ್ರ ಅವರ ಕವನ ಸಂಕಲನ ವಖಾರ ( ಗುಜರಾತಿ ಭಾಷೆ ) ೨೦೧೮- ಕೆ ಶಿವ ರೆಡ್ಡಿ ಅವರ ಕವನ ಒಟ್ಟಿಗಿಲೈಟಿ (ತೆಲಗು ಭಾಷೆ) == ಸರಸ್ವತಿ ಸಮ್ಮಾನಿತ ಕನ್ನಡಿಗರು == ೨೦೧೦ - ಡಾ. ಎಸ್.ಎಲ್. ಭೈರಪ್ಪ ಅವರ ಮಂದ್ರ ಕಾದಂಬರಿ ೨೦೧೪ - ವೀರಪ್ಪ ಮೊಯಿಲಿ ಅವರ ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂ == ಉಲ್ಲೇಖ ==